ಮಹೇಂದ್ರ
	ಮೌರ್ಯ ಸಾಮ್ರಾಟ ಅಶೋಕನ ಮಗ ಅಥವಾ ಸಹೋದರ. ಕ್ರಿ.ಪೂ. 251ರಲ್ಲಿ ಬೌದ್ಧಧರ್ಮ ಪ್ರಚಾರಕ್ಕಾಗಿ ಶ್ರೀಲಂಕಾಕ್ಕೆ ತೆರಳಿದ ನಾಯಕ. ಅಲ್ಲಿಯ ದೊರೆ ಶಿಸ್ಸ. ರಾಜಕುಟುಂಬದ ಸದಸ್ಯರು ಮತ್ತು ಅನೇಕ ಜನಸಾಮಾನ್ಯರನ್ನು ಬೌದ್ಧಧರ್ಮಕ್ಕೆ ಪರಿವರ್ತಿಸಿದ. ಅಶೋಕನ ಶಾಸನಗಳಲ್ಲಿಯೂ ಈತನ ಉಲ್ಲೇಖವಿಲ್ಲ. ಆದರೆ ಶ್ರೀಲಂಕಾದ ಇತಿವೃತ್ತಗಳಾದ ದೀಪವಂಶ ಮತ್ತು ಮಹಾವಂಶಗಳಲ್ಲಿ ಈತನ ಬಗ್ಗೆ ವಿವರಗಳಿವೆ. ಅನುರಾಧಪುರದಲ್ಲಿ ಈತನ ಗೌರವಾರ್ಥ ಸ್ಮಾರಕಗಳು ರಚಿತವಾದುವು. 204ರಲ್ಲಿ ಮಹೇಂದ್ರ ಅನುರಾಧಪುರದಲ್ಲಿ ಮೃತನಾದ. 	 
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ